ಎರಡು ವಾರದ ಸುದೀರ್ಘ ವಿರಾಮದ ನಂತರ ಪುನಃ ನಿಮ್ಮ ಮುಂದೆ ಬಂದಿದ್ದೇನೆ. ಬರೆಯಲು ವಿಷಯವೇ ಇರಲಿಲ್ಲವೆಂದಲ್ಲ. ವಿಷಯವಿತ್ತು. ಸಮಯದ ಅಭಾವ ಕಾಡುತ್ತಿತ್ತು. ಅದಿರಲಿ, ನನ್ನ ಪೋಸ್ಟ್ ಗಾಗಿ ಕಾದು, "ಏಕೆ ಏನೂ ಬರೆಯಲೇ ಇಲ್ಲ" ಎಂದು ಕೇಳಿದವರು ಬಹಳ ಕಡಿಮೆ ಸ್ನೇಹಿತರಾದರೂ, ಎಲ್ಲರಿಗೂ ಈ ವಿಷಯವಾಗಿ ಕ್ಷಮೆ ತಿಳಿಸುತ್ತಾ, ವಾರಾಂತ್ಯದಲ್ಲಿ ನಡೆದ "ಏಳು ರೊಟ್ಟಿ"ಗಳ "ಲೈಫು ಇಷ್ಟೇನೆ" ಯ ವಿಮರ್ಷೆ ಬರೆಯುತ್ತಿದ್ದೇನೆ. ಓದಿ ಆನಂದಿಸಿ(!!??) :-)
:: ಲೈಫು ಇಷ್ಟೇನೆ ::
"When a girl closes her eyes, she sees the person she loves the most. But when a boy does the same there starts a slideshow" ಎಂಬ ಒಂದು ಉಕ್ತಿ ಇದೆ. ಹಾಗೆಂದ ಮಾತ್ರಕ್ಕೆ ಗಂಡು ಮಕ್ಕಳೆಲ್ಲರೂ flirts......ತಮ್ಮ ಹಳೆಯ ಪ್ರೀತಿಯನ್ನು ಮರೆತು ಹೊಸತಿಗೆ ಕೈ ಹಾಕಿ ಪುನಃ ಕೈ ಸುಟ್ಟುಕೊಳ್ಳುತ್ತಾರೆಂದಲ್ಲ. ಪ್ರಾಯಶಃ ಹುಡುಗಿಯರಿಗಿಂತ ಬಹು ಸುಲಭವಾಗಿ ಪ್ರೀತಿಯವಿಷಯದಲ್ಲಿ ಸೋಲೊಪ್ಪಿ ಮತ್ತೊಂದು ಮಹತ್ಸಾಧನೆಗೆ ಮುಂದಾಗುತ್ತಾರೆ ಎನ್ನಬಹುದು. ಬಹುತೇಕ ಇದೇ ಥೀಮ್ ಇಟ್ಟುಕೊಂಡೇ ಪವನ್ ಕುಮಾರ್ ಈ ಚಿತ್ರ ಮಾಡಿದ್ದಾರೆ ಅಂತ ಭಾವಿಸುತ್ತೇನೆ.
ನಾಯಕ ತಾನು ಶಾಲಾ ದಿವಸದಿಂದ ಅನುಭವಿಸಿದ ಪ್ರೀತಿಯ ಮಜಲುಗಳನ್ನು, ತಾನು ಪ್ರೇಮದಲ್ಲಿ ಕಂಡುಕೊಂಡ ಸೋಲು, ಕಳೆದುಕೊಂಡ ಹುಡುಗಿಯರನ್ನು ಮೆಲಕು ಹಾಕುತ್ತಾನೆ ತಲೆಯ ಮಸಾಜ್ ಮಾಡುವ ಅಜ್ಜನಿಗೆ. ಶಾಲೆಯ ದಿನಗಳಲ್ಲಿ ಪ್ರೀತಿಯೇ ಎಂದು ಮೂಗು ಮುರಿಯಬೇಡಿ. ಪ್ರೀತಿ-ಪ್ರೇಮ ಎಂಬ ಮಾಯೆಯ ಬಗ್ಗೆ ಹುಡುಗನಿಗೆ ಅರ್ಥವಾಗುವುದರೊಳಗೆ ತಾನು ಅದನ್ನು ಕಳೆದುಕೊಂಡು SUCKER, LOSER ಎನಿಸಿಕೊಳ್ಳಲಾರಂಭಿಸುತ್ತಾನೆ. "ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮು...... " ಹಾಡು ಈ ಪ್ರಕರಣಗಳ gist ಅಷ್ಟೇ...ಪ್ರತಿ ಬಾರಿಯೂ ಹುಡುಗಿಯನ್ನು ಕಂಡು ಮೋಹಿತನಾಗಿ ಮೊದಲನೆಯ ಬಾರಿ ನಿಜವಾದ ಪ್ರೀತಿ ಅನುಭವಿಸುತ್ತಿದ್ದೇನೆಂದು, "Move on" ಆಗುತ್ತಿದ್ದ ಈ ಸಕರ್ ನ ಜೀವನಗಾಥೆಯೇ ಲೈಫು ಇಷ್ಟೇನೆ. ತನ್ನ ಕಾಲೇಜು ದಿನಗಳಲ್ಲಿ ಕಂಡುಕೊಂಡ ಮತ್ತೊಬ್ಬ ಪ್ರೇಯಸಿ ಅವಳ ತಂದೆಯನ್ನು ಎದುರಿಸಲಾಗದೇ ನಾಯಕನನ್ನು ಬಿಟ್ಟು ಮತ್ತ್ಯಾರನ್ನೋ ಮದುವೆಯಾಗುತ್ತಾಳೆ. ಅವಳ ಮದುವೆಯ ದಿನವೇ ಮತ್ತೊಬ್ಬ ಹುಡುಗಿಯನ್ನು ಇಷ್ಟಪಟ್ಟು, ಅವಳಿಂದಲೂ ದೂರವಾಗುತ್ತಾನೆ. ಕೊನೆಗೆ ನೆಲೆ ಕಂಡುಕೊಳ್ಳುವ ಈ ನಾಯಕ ದುಬೈ ನಲ್ಲಿ ದುಡಿಯಲಾರಂಭಿಸಿ ತನ್ನ ಜೀವನವನ್ನು ತಕ್ಕ ಮಟ್ಟಿಗೆ ರಿಪೇರಿ ಮಾಡಿಕೊಳ್ಳುತ್ತಾನೆ.
ಈ ಚಿತ್ರದಲ್ಲಿ ಖಂಡಿತವಾಗಿಯೂ ಮೆಸೇಜ್ ಇದೆ. ಪವನ್ ಕುಮಾರ್ ರ ನಿರ್ದೇಶನದಲ್ಲಿ ಪ್ರಬುದ್ಧತೆ ಇದೆ. ದಿಗಂತ ತಮ್ಮ ಹಳೆಯ ಎಲ್ಲಾ ಮೂವಿಗಳಿಗಿಂತಲೂ ಬಹಳ ಚೆನ್ನಾಗಿ ನಟಿಸಿದ್ದಾರೆ. ಉಳಿದಂತೆ ಸತೀಶ್, ಅಚ್ಯುತಕುಮಾರ್, ಪವಿತ್ರ ಲೋಕೇಶ್ ಎಲ್ಲರೂ ಒಳ್ಳೆಯ ಅಭಿನಯ ನೀಡಿದ್ದಾರೆ. ಹೊಸ ಪರಿಚಯ (!??) ಸಂಯುಕ್ತಾ ಬೆಳವಾಡಿ ಅಭಿನಯ, ಡಯಲಾಗ್ ಡೆಲಿವರಿ ಚೆನ್ನಾಗಿ ಮೂಡಿಬಂದಿಲ್ಲ. ರಾಜು ತಾಳಿಕೋಟಿಗೆ ಮೂರ್ನಾಲ್ಕು ಡಯಲಾಗ್ ಮಾತ್ರ ಇರುವುದರಿಂದ ಅವರ ಅಭಿಮಾನಿಗಳಿಗೆ ಕೊಂಚ ಬೇಸರವಾಗಬಹುದು. ಮನೋಮೂರ್ತಿಯವರ ಸಂಗೀತ, ಬೊಂಬಾಟ್. ಹಾಡುಗಳ, ಸಿನೆಮಾ ಚಿತ್ರೀಕರಣ ಹೆಚ್ಚಾಗಿ ಬೆಂಗಳೂರಲ್ಲೇ ನಡೆದಿದೆ. ಆದರೆ ಎರಡು ಹಾಡುಗಳಿಗೆ - " ಮಾಯಾವಿ ಮಾಯಾವಿ", "ನಿನ್ನ ಗುಂಗಿನಲ್ಲಿ" ಲಡಾಕ್ ನಲ್ಲಿ ಚಿತ್ರೀಕರಿಸಿದ್ದು ಆ ಹಾಡುಗಳು ಮೆರುಗಿನಿಂದ ಕೂಡಿದೆ. ಮತ್ತೆರಡು ಹಾಡುಗಳಲ್ಲಿ - " ಜೂನಿಯರ್ ದೇವದಾಸ", "ಯಾರಿಗೆ ಹೇಳೋಣ" ಬಂದು ಹೋಗುವ Contemporary dancers - ರಾಕೇಶ್, ಪ್ರಶಾಂತ್, ಅಂಬರೀಶ್ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಹಾಡುಗಳ ಲಿರಿಕ್ಸ್ ನೀವು perceive ಮಾಡುವ ಹಾಗೆ. ಹಲವರಿಗೆ ಇಷ್ಟವಾಗಿದೆ. ಒಟ್ಟಿನಲ್ಲಿ ಯುವಕರು ನೋಡಬಹುದಾದ ಚಲನಚಿತ್ರ. ಪ್ರಾಯಶಃ ಹಿರಿಯರು ಈ ಚಲನಚಿತ್ರ ನೋಡಿದರೆ "ಶುಭಂ" ಅಂದಾರು, ಆದ್ದರಿಂದ ಅವರ Feedback ತೆಗೆದುಕೊಳ್ಳಬೇಡಿ. ( ಶುಭಂ ಎಂದರೆ ನಿರ್ದೇಶಕರಾದ ಗುರುಪ್ರಸಾದ್ ಪ್ರಕಾರ ಶುದ್ಧ ಭಂಡಲ್ ಎಂದು)
:: ಏಳು ರೊಟ್ಟಿಗಳು ::
ಇನ್ನು ಭಾನುವಾರ ಕೆ. ಎನ್. ಗಣೇಶಯ್ಯನವರ "ಏಳು ರೊಟ್ಟಿಗಳು" ಕಿರುಕಾದಂಬರಿಯನ್ನು ಓದಿ ಮುಗಿಸಿದೆ. ಈ ಕಾದಂಬರಿ ಬಿಡುಗಡೆಯಾದ ಮರುದಿನವೇ ತರಿಸಿಕೊಂಡರೂ ಎಡೆಬಿಡದೆ ಓದಲು ಆಗಿರಲಿಲ್ಲ. ಖಂದಿತವಾಗಿಯೂ ಓದಬಹುದಾದ ಕಾದಂಬರಿ ಇದು. ಹೈದರಾಬಾದಿನ ನಿಜಾಮ - ಉಸ್ಮಾನ್ ಅಲಿ ಖಾನ್ ಎಂಬುವವನ ಕುರಿತಾದ ಈ ಕಾದಂಬರಿ ಕೆ. ಎನ್. ಜಿ ಯವರ ಎಲ್ಲಾ ಕಾದಂಬರಿ, ಕಥೆಗಳ ಹಾಗೆಯೇ ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ಜಾನ್ ಜುಬೃಜುಕಿಯ "The Last Nizam" ಎಂಬ ಪುಸ್ತಕವನ್ನು ಕುರಿತು ಇವರು ಹೆಣೆದಿರುವ ಕಥೆ ಬಹಳ ರೋಚಕವಾಗಿದೆ. ನಿಜಾಮನು ಬಹಳ ಹಣವಂತನಾಗಿದ್ದು, ಅವನ ಬಳಿ ಹಣ, ಧನಕನಕಗಳು ಎಷ್ಟಿತ್ತೆಂದರೆ ಬ್ರಿಟಿಷರಿಗೂ ಮಹಾಯುದ್ಧದಲ್ಲಿ ಸಾಲ ಕೊಟ್ಟವನು ಈ ಉಸ್ಮಾನ್ ಅಲಿ ಖಾನ್. ಸರ್ದಾರ್ ವಲ್ಲಭಭಾಯಿ ಪಟೇಲ್ ರವರು ಭಾರತದ ಗೃಹ ಮಂತ್ರಿಯಾಗಿದ್ದಾಗ ಈ princely states ಗಳನ್ನು ಭಾರತಕ್ಕೆ ಸೇರಿಸಿ ದೇಶಕಟ್ಟುವ ಸಂದರ್ಭದಲ್ಲಿ ಈ ನಿಜಾಮ ಮೊಹಮಾದ್ ಅಲಿ ಜಿನ್ನಾನ ಸಹಾಯ ಪಡೆದು ಹೈದರಾಬಾದನ್ನು ಪ್ರತ್ಯೇಕ ದೇಶವನ್ನಾಗಿಸಬೇಕೆಂದು ಆಸೆ ಪಟ್ಟಿದ್ದನಂತೆ. ಕಡೆಗೆ ಆಪರೇಷನ್ ಪೋಲೋ ಅಡಿ ಪಟೇಲರು ಹೈದರಾಬಾದನ್ನು ಭಾರತಕ್ಕೆ ಸೇರಿಸಿಕೊಂಡ ಸಂದಭದಲ್ಲಿ, ಭಾರತ ಬಿಟ್ಟು, ತನ್ನ ಆಸ್ತಿಯನ್ನೆಲ್ಲಾ ತೆಗೆದುಕೊಂಡು ಹೋಗಿ ಈಜಿಪ್ಟ್ ನಲ್ಲಿ ನೆಲೆಯೂರಬೇಕೆಂಬ ಹುನ್ನಾರ ನಡೆಸಿದ್ದನು. ಭಾರತದ ಸೇನೆ ಇವನ ಸಾಮ್ರಾಜ್ಯದ ಮೇಲೆ ಧಾಳಿ ನಡೆಸುವ ಸಂದರ್ಭದಲ್ಲಿ ನಿಜಾಮ್ ಆಗಲೇ ಕಾಟನ್ ಸಿಡ್ನಿ ಎಂಬ ಅಂತರರಾಷ್ಟ್ರೀಯ ಠಕ್ಕ ನ ಸಹಾಯದಿಂದ ವಿಮಾನಗಳಲ್ಲಿ ಹಣ, ವಜ್ರ-ವೈಢೂರ್ಯಗಳನ್ನು ತುಂಬಿಸಿ ಸಿದ್ಧನಾಗಿದ್ದನು. ತನ್ನ ನಮಾಜ್ ಮುಗಿಸುವ ವೇಳೆಗಾಗಲೆ ಧಾಳಿ ನಡೆದು ಆ ಹಣವೆಲ್ಲ ಸುಟ್ಟುಹೋಗಿರಬಹುದೆಂದು ಕೆಲವರ ನಂಬಿಕೆ. ಮತ್ತೆ ಕೆಲವರ ನಂಬಿಕೆಯಂದರೆ ಈ ಹಣವನ್ನೆಲ್ಲಾ ಆಗಲೇ ಗೋದಾವರಿಯ ನದಿಯ ಬಳಿಯ ಯಾವುದೋ ಕಾಡಲ್ಲಿ ಮುಚ್ಚಿಡಲಾಗಿದೆಯೆಂದು. ನಿಜಾಮ್ ಇಜಿಪ್ಟ್ ಗೆ ಹಾರಲಾಗಲಿಲ್ಲ. ಆದರೆ ನಿಧಿ ಎಲ್ಲೆ ಹೋಯಿತು???? ಆ ನಿಧಿಯಿದ್ದ ಜಾಗದ ಬಗ್ಗೆ ಅಲ್ಪ ಸ್ವಲ್ಪ ತಿಳಿದ ರಜಾಕರು, ಸಿದ್ಧಿಗಳು (ಸಿದ್ಧಿಗಳು Africa ದಿಂದ ನಿಜಾಮ್ ತನ್ನ ರಕ್ಷಣೆಗಾಗಿ ಕರೆಸಿಕೊಂಡು ಸಾಕುತ್ತಿದ್ದ ನಿಷ್ಠಾವಂತ ಸೈನಿಕರು.) ಆ ನಿಧಿಯನ್ನೇನು ಮಾಡುದರು ಎಂಬುದಕ್ಕೆ ಪುರಾವೆಗಳಿಲ್ಲ. ಯಾರು ಆ ಆಸ್ತಿಯನ್ನು ಅನುಭವಿಸುತ್ತಿದ್ದರೆಂಬುದಕ್ಕೆ ಎಲ್ಲೂ ವ್ಯಾಖ್ಯಾನವಾಗಿಲ್ಲ. ಇದರ ಜಾಡನ್ನೇ ಹುಡುಕಿಕೊಂಡು ಹೊರಟ ಮುಂಗೇಪ, ಸರಳ, ವಿನಯ್, ಅನಂತರಾಜು, ಕಲ್ಯಾಣ್ ರ ಕಥೆಯೆ ಏಳು ರೊಟ್ಟಿಗಳು. ಇದರಲ್ಲಿ ಸಸ್ಪೆನ್ಸ್ ಇದೆ, ಸತ್ಯಗಳಿವೆ, ಪುರಾವೆಗಳಿವೆ, Fiction ಇದೆ ಮೇಲಾಗಿ ನಿಮ್ಮ ೯೫ ರೂ ಗೆ ಮೀರಿದ ಥ್ರಿಲ್ ಇದೆ.
ಏಳು ರೊಟ್ಟಿಗಳು ಓದಿರಿ, ಲೈಫು ಇಷ್ಟೇನೆ ಇಷ್ಟೇನೆ ನೋಡಿರಿ......
ಇಂತಿ ನಿಮ್ಮ,
ಪ್ರ ಕೊ ಪ